Friday, November 9, 2012

ಡ್ರೈವರನನ್ನು ಮೆಚ್ಚಲೆ ಬೇಕು...

ಹಾಗೆ ಪಿಯುಸಿ ಮುಗಿಸಿ ಒಳ್ಳೆ ರ್ಯಾಂಕು ಬಂತು ದೇವರ ದಯೆ ಯಿಂದಾ ಅಂತಾ ಯೊಚನೆ ಮಾಡೊದ್ರಾ ಒಳಗೆ. ಸಿ.ಈ.ಟಿ. ಕೌನ್ಸಿಲಿಂಗು ಅಂದರು. ನನಗು ಮನಸಲ್ಲಿ ಸ್ವಲ್ಪಾ ಹೆದರಿಕೆ ಯಾವ್ ಕಾಲೇಜ್ ಸಿಗತ್ತೊ  ಯೇನ್ ಮಾಡೊದೊ ಯೇವ್ ಊರಿಗೆ ಹೊಗಬೇಕೊ ಅಂತಾ ಹೆದರಿಕೆ ಯಿಂದಾನೆ ಬಂದೆ ಬೆಂಗಳುರಿಗೆ. ಇಲ್ಲಿನೆ ಬಹುಮಹಡಿ ಕಟ್ಟಡ ಜನಸಂಕ್ಯೆ ಯೆಲ್ಲಾ ನನಗೆ ಹಳೆಯದೆನಲ್ಲಾ ನಾನು ದೊಡ್ಡ ಊರಿನಲ್ಲಿ ಸ್ವಲ್ಪ ದಿನ ಕಳೆದು ಅಭ್ಯಾಸ ಇತ್ತು. ಅಂತು ಕಶ್ಟಾ ಪಟ್ಟು ಸೀ.ಇ.ಟಿ. ಸೆಲ್ ಹುಡಕಿ ರಾಮಯ್ಯ ಕಾಲೇಜಿನಲ್ಲಿ ಸೀಟು, ಅಂತಾ ಆಯತು.

ಖುಷಿ ಅಂತು ಆಯಿತು ಆಗದೆ ಇರತ್ತ ನನ್ನ ಇನ್ನು ೨ ಜನ ಪಿಯುಸಿ ದೊಸ್ತರು ಅಲ್ಲೆ ಸೀಟ್ ಸಿಕ್ಕಿದೆ ಅಂತಾ ಹೇಳಿದ್ದರು. ಅಂತಾ ಹೆದರಿಕೆ ಯೇನು ಆಗಲಿಲ್ಲ. ಆದರೆ ಅಪ್ಪನಿಗೆ ಮಾತ್ರಾ ಯೆಲ್ಲದರಲ್ಲು ಅವಸರ.  ಸೀಟೆನೊ ತಗೊಂಡಾಯಿತು ೨ ದಿನಾ ಬೆಂಗಳುರು, ಹಾಸ್ಟೆಲು, ಕಾಲೆಜು, ಯೆಲ್ಲಾ ಸುತ್ತಿ ನೋಡಣಾ ಅಂತಾ ಇದ್ದೆ. ಅಹಾ ಅಪ್ಪ ಮಾತ್ರಾ ಒಪ್ಪಲೆ ಇಲ್ಲ ಬೆಳೆಗ್ಗೆ ೪ ಗಂಟೆಗೆ ಯೇಳಿಸಿ ಸ್ನಾನಾ ಮಾಡಿಸಿ ಕಾಲೇಜ್ ನಲ್ಲಿ ಅಡ್ಮಿಶನ್ ಮಾಡಿಸಿ. ೧೦ ಗಂಟೆ ಬೆಳಗಿನ ಜಾವದ ಬಸ್ಸಿಗೆ ಹತ್ತಿಸಿ ಕಳುಹಿಸಿಯೆ ಬಿಟ್ತರು ಮನೆಗೆ. 

ತುಮಕುರು ಮುಟ್ಟುವ ಹೊತ್ತಿಗೆ ಬಸ್ಸು ತನ್ನ ನಿಜವಾದ ಸ್ತಿತಿ ತೊರಸಿತ್ತು. ಮುಂದಿನ ಯೆರಡು ಗಾಜು ಕಳಚಿ ಬಿದ್ದಿತು. ಡೀಪೊಗೆ ಹೋಗಿ ಸರಿ ಮಾಡಿಸಿ ಕೋಂಡು ಹೋಗೊಂಣಾ ಅಂತಾ ಡ್ರೈವರ್ರು ತಿರುಗಿಸಿದಾ ಡೀಪೊ ಕಡೆ ಅಂತು ೧ ಘಂಟೆ ನಂತರ ಪಿಕ್ಸ್ ಆಗಿದೆ ಅಂತಾ ಮತ್ತೆ ಹೊರಟಿ ನಿಂತಿತು ಬಸ್ಸು. ಹೊರಟು ೧೫ ನಿಮಿಶಾನು ಆಗಿರಲಿಲ್ಲಾ ಮತ್ತೆ ಬಿದ್ದವು ೨ ಗ್ಲಾಸ್. ಡ್ರೈವರ್ ಆದರು ಬಿಡಲಿಲ್ಲ ಗಾಳಿ ಯೆಶ್ಟಾದರು ಬರಲಿ ಹೋಗೆ ಬಿಡೊಣಾ ಅಂತಾ ಗಾಡಿ ಪುಲ್ ಸ್ಪೀಡಿನಲ್ಲಿ ಹೊಗ್ತಾನೆ ಉಳದ ಬಸ್ಸಿ ನಲ್ಲಿ ಒಳ್ಳೆ ಚಂಡಮಾರುತಾ ಬೀಸಿದ ಹಾಗೆ ಗಾಳಿ ಹೊಡೆತಾ. 

ಹಾಗೆ ೪ ಗಂಟೆ ಗ್ಲಾಸ್ ಇಲ್ಲದೆ ಪ್ರಯಾಣಾ ಮಾಡಿದ ನಂತ್ರರ ಮಳೆ ಶುರುವಾಯಿತು. ಈಗಾ ಯೇನು ಮಾಡೊದು ಒಂದು ರಗ್ಗನ್ನು ತಂದು ಡ್ರೈವರನ ಹಿಂದೆ ಕಟ್ಟಿದರು ಮಳೆ ನೀರು ಬಸ್ಸಿನ ಒಳಗೆ ಬರದಂತೆ ಅದು ಯೆಲ್ಲಿ ತಡಿಯತ್ತೆ. ಸಾಕಾಗಲಿಲ್ಲಾ ಒಂದು ಗೋಣಿ ಚೀಲಾ ಯೆಲ್ಲಾ ಕಟ್ಟಿ ಆದಮೇಳೆ ಹೇಗೊ ಸ್ವಲ್ಪಾ ಮುಂದಿನ ೫ ಸೀಟ್ ಬಿಟ್ಟು ಒದ್ದೆ ಆಗದಂತೆ ಕೂತೆವು. ಪಾಪಾ ನಾವೆನೊ ಮಾಡಬಹುದು ಡ್ರೈವರ್ ಯೇನು ಮಾಡಿಯಾನು. ಅವನು ದೈರ್ಯಾ ಮಾಡಿ ನಾನು ಗಾಡಿ ಓಡಿಸುತ್ತೆನೆ ನೀವು ಒಂದು ರೈನ್ ಕೋಟ್ ಕೊಡಿ ಅಂದ ಬಸ್ಸು ಯಾರೊ ಒಂದು ರೈನ್ ಕೋಟ್ ಕೊಟ್ತರು. ಅದರೆ ಸಾಗರ ದಟುವ ಹೊತ್ತಿಗೆ ಮಳೆ ತುಂಬಾ ಹೆಚ್ಚಯಿತು. ಗಾಳಿನು ಜಾಸ್ತಿ ಆಯಿತು ಚಳಿ ಬೇರೆ. ಅದಕ್ಕೆ ಮತ್ತೊದು ಸ್ವೆಟ್ಟರ್ ಹಾಕಿ ಅದರ ಮೇಲೆ ರೈನ್ ಕೋಟ ಹಾಕಿ ಡ್ರೈವರ್ ರೇಡಿ ಮಾಡಿ ಬಸ್ಸು ಹೊರಟಿತು.

ಅಂತು ಸಿದ್ದಪುರಾ ದಾಟಿದಮೇಳೆ ಮಳೆ ತಾಳಲಾಗದೆ ಒಂದು ಕನ್ನಡಕ. ಒಂದು ಟೊಪ್ಪಿ ಹಾಕಿ ಮತ್ತೆ ಬಸ್ಸು ಚಾಲನೆ ಶುರು. 
೫ ಗಂಟೆ ಮಳೆಯಲ್ಲಿ ನೆನೆದು ಸಿರ್ಸಿ ತಂದು ೧೦ ಗಂಟೆಗೆ ಸರಿಯಾಗಿ ಮುಟ್ಟಿಸಿದ ಕೆ.ಎಸ್.ಅರ್.ಟಿ.ಸಿ. ಡ್ರೈವ ಮತ್ತು ಕಂಡಾಕ್ಟರ್ ಗಳಿಗೆ ಧನ್ಯವಾದ.

--- ಸುಮಂತ

No comments:

Post a Comment