Thursday, October 18, 2012

ಬೆಂಗಳುರು -- ಸಿರ್ಸಿ


ತಗಳಪ ಇವತ ಸಂಜೆ ಮನೆಗೆ ಹೋಪದು. ಸುಮಾರ ೧೦ ತಿಂಗಳಿಂದಾ ಕೆಲ್ಸಾ ಅದು ಇದು ಹೇಳಿ ಮನೆಗೆ ಹೊಗದ್ದೆ ಕೂತಾತು. ಆದ್ರೆ ಅಂತು ನವರಾತ್ರಿಗೆ ಕಾಡಿ ಬೇಡಿ ೨ ದಿನಾ ರಜೆ ಗಿಟ್ಟಸ್ಕಂಡೆ ಬಿಟ್ಟಿ ಬಿಲ್ಯಾ. ಹೋಪ ಉತ್ಸಾಹಕ್ಕೆ ಬೇಳಗಿಂದಾ ಯೆಂತದು ಮಾಡಿದ್ನಿಲ್ಲೆ. ಹೊರಡ ಟೈಮಗೆ ಕಾಯತಾ ಇದ್ದಿದ್ದು ಅಶ್ಟೆ. ಮನೆಲಂತು ಮಗಾ ಬತ್ತಾ ಇದ್ದಾ ಹೇಳಿ ಅಮ್ಮಂತು ಅದ್ರ ತಗಾ ಬಾ ಇದ್ರ ತಗಾ ಬಾ. ದೊಡ ಬ್ಯಾಗ್ ತಗಬಾ ಅದ್ರಾ ತುಂಬಕಂಜ್ಯ ಇದು ಯೆಲ್ಲಿಟ್ಟಿದೆ ೫ ನಿಮಶಕ್ಕೆ ಒಂದೊಂದು ಫೊನು. ಅಂತು ಯೆಲ್ಲಾ ಸುದಾರಸಿ ೪ ಬಟ್ಟೆ ಹಾಕಂಡು ಹೊರಟ್ಯ. ಅದೇ ಟೈಮಿಗೆ ಒಬ್ಬಂಗೆ ಭಾರಿ ಯೊಚನೆ ಬಂತು ಟ್ರೈನ್ ಗೆ ಹೊಗ್ಬಿಡನ ಹೇಳಿ ನನಗು ಇನ್ನು ಟ್ರೈನ್ ಹತದವಲ್ಲಾ ಸಕತ್ ಉಮೇದಿ ಬಂತು ಯೆಲ್ಲಾ ಸೇರಿ ಜೈ ಹೋಗೆಬಿಡನ ಹೇಳಿ ಹೊರಟ್ಯ.
ಗಾಡಿ ಯೇನೊ ಸುಪರ್ರು ಜನರಲ್ ಟ್ರೈನು. ನಾವು ಯೆಲ್ಲಾ ಒಂದೆ ವಾರಗೆ ಯವ್ವೆ ೫ ಜನಾ ಹತ್ತದ್ಯಾ ಹೇಳಾತು ಕಷ್ಟಾ ಪಟು ಮೆಜೆಸ್ಟಿಕ್ ರೈಲ್ವೆಯ ಸ್ಟೆಶನ್ನಿಂದಾವಾ ಹಾವೇರಿ ಗೆ ಹೊಪಲೆ. ಸ್ವಲ್ಪಾ ಹೊತ್ತಲ್ಲೆ ಗೊತ್ತಾತು ಇದಕ್ಕೆ ಜನರಲ ಯೆಂತಕ್ಕೆ ಹೇಳತಾ ಹೇಳಿ ಯೆಲ್ಲಿ ನೋಡದ್ರು ಜನಾನೇಯಾ. ಸೀಟು ಸಿಕ್ಕತಲ್ಲಾ ಅಂತಾ ಅರಾಮ ಹೇಳಿ ಇದ್ದಿದ್ದೆ ಅಶ್ಟೆ ಹೊತ್ತಿಗೆ ಒಂದ ಜೋಡಿ ಬಂದ ೩-೪ ವರ್ಷದ ಮಗು ಕರಕಂಡು ಸ್ವಲ್ಪಾ ಜಾರ್ಕೊಳಿ ಸಾರ್ ಅವರಾ ಆ ಹೊಣ್ ಬಾರದ್ದು ಬ್ಯಾಗು ಆ ಪಾಪು ನಾ ನೋಡಿ ಕುತಗಳಿ ಅಂತಾ ಸ್ವಲ್ಪಾ ಸರಾದಾತು. ಅಂತು ೪ ಜನರ ಸೀಟಲ್ಲಿ ೭ ಜನಾ ಆತು.
ಇನ್ನೆನೆ ಟ್ರೈನ್ ಹೊರಡವು ೨೦ ಜನ ಬಂದ ಒಬ್ಬವಾ ಉದ್ದಾ ಸೀಟೆ ಕೆಳಗೆ ಟುವಾಲ ಹಾಕಂಡು ಮಲಕಂಡ ಹೋಗಲಿ ಬಿಡೀ ಅವನಿಗು ಜಗಾ ಬೇಕಲ್ಲಾ ಅಂತಾ ಮಜಾ ಇದೆ ಅನಸ್ತು. ೭-೮ ಜನಾ ಮೇಲಿನಾ ಸೀಟ ಹತ್ತಿದರು ಕಾಲನ್ನಾ ಬಟ್ಟೆ ಒಣಗಿಸಿದಾ ಹಾಗೆ ಕೆಳಗೆ ಇಳಿ ಬೀಟ್ವಪಾ. ಈಗಾ ಒಟ್ಟು ಒಂದ ಸೀಟಲ್ಲಿ ೭ ಜನಾ ಕೆಳಗೆ ಮಲಗಿದವ್ನು. ಮೇಲಿನಾ ಸೀಟಲ್ಲಿ ೭-೮ ಜನಾ ಒಟ್ಟು ೮ ಜನಾ ಹೋಗೊ ಸೀಟಲ್ಲಿ ೨೦ ಜನಾ ಆದ್ರು. ಇರ್ಲಿ ಕಾಲು ಅಲುಗಾಡಿಸುವ ಹಾಗಿಲ್ಲಾ ಕೈ ಜೊರಾಗಿ ಯೆತ್ತೊ ಹಾಗಿಲ್ಲ
ಬೇರೆಯವರ ಮುಖಕ್ಕೆ ಬಡಿಯತ್ತೆ. ಹೆಂಗೊ ಬಂದಿದ್ದು ಬಂದಾಜು ಒಟ್ಟು ಹೋರಟ್ರೆ ಸಾಕು ಹೇಳಿ ಕಾಯತಾ ಇದ್ದಿದ್ದಿ. ಅಂತು ಕುಉಉಉ ಹೇಳಿ ಶಭ್ದಾ ಮಾಡಕತ್ತಾ ಹೊರಟಾ ಹೇಳತು ಹೊರಟು ೨ ನಿಮಶಾ ಆಜಿಲ್ಲೆ ಸ್ಟೊಪ್ ಬಂದೊತು. ೧೫ ನಿಮಶಾ ನಿಲಸ್ದಾ ಆತು ಮತ್ತೆ ಹೊರಟಾ ೨ ನಿಮಶಾ ಹೋದಾ ೧೫ ನಿಮಶಾ ನಿಲಸ್ದ. ಇದು ಅಪ್ಪದಲ ವರಗಿ ಬಿಡನ ಹೇಳಿ ಮಲಗ್ದೆ ಹೇಳಾತು ಆ ಗಲಾಟೆ ಗೌಜಿ ಗೆ ೫-೧೦ ನಿಮಶಕ್ಕೆ ಯೆಚರಪ್ಪದು. ಯೆದ್ದು ನೋಡತು ಯಾವಾಗ ನೋಡ್ರು ಟ್ರೈನ್ ನಿತಗಂಡೆ ಇರತು. ಬೆಳಗಾತು ಇನ್ನು  ಹೊಗ್ತಾ ಇದ್ದಾ ಹೊಗ್ತಾ ಇದ್ದ ಹಾವೆರಿ ನೆ ಬತ್ತಿಲ್ಲೆ. ಅಂತು ೧೧ ಗಂಟೆಗೆ ತಂದು ಹಾವೇರಿ ಮುಟ್ಟಸ್ದಾ. ಅಲ್ಲಿಂದಾ ಬಸ್ ಸ್ಟಾಂಡ್ ಗೆ ಒಳ್ಳೆ ಆಟೊ ವ್ಯವಸ್ತೆ ಇತ್ತು ಬಂದಾತು. “ಸಿರ್ಸಿ ಗೆ ಬಸ್ಸು ಯೆಷ್ಟ್ ಗಂಟೆಗೆ ಬರತ್ತಪ್ಪಾ?” ಅಂತಾ ಕೇಳದೆ “೨ ತಾಸ್ ಆಗತ್ತೆ ಸರ್” ಅಂದ್ ಬಿಡಬೇಕೆ ಆಯ್ತು ಅಂತಾ ಕಶ್ಟಾ ಪಟ್ಟು ಯೆಲ್ಲೊ ಒಂದು ತಿಂದುದು ೨ ತಾಸ್ ಕಾದು ಹತ್ತಿದೆ ಬಸ್ಸು ಸಿರ್ಸಿಗೆ ಅದು ಆಕಡೆ ಈ ಕಡೆ ವಾಲತಾ ಹೊರಡತು. ಅರ್ದಾ  ದಾರಿಗೆ ಟೈರ್ ಪಂಚರ ಆಗಿದೆ ಅಂತಾ ನಿಲ್ಲಸಿ ಬಿಡಬೇಕಾ. ನನ್ನ ಹೊಟ್ಟೆ ಬೇರೆ ತಾಳಾ ಹಾಕತಾ ಇದೆ ಇರೊ ರಜೆ ನೆ ೨ ದಿನಾ ಹೋಗೊಕೆ ೨ ದಿನಾ ಆಯತಲ್ಲಪಾ ಅಂತಾ ಬೈತಾ ಸ್ವಲ್ಪಾ ಹೊತ್ತನಲ್ಲೆ ಡ್ರೈವರ್ರು ಕಂಡಕ್ಟರ್ರು ಸೇರಿ ಹತ್ತಿ ಹತ್ತಿ ಸರಿ ಆಯತು ಗಾಡಿ ಅಂದಿದ್ದೆ ತಡಾ ಓಡಿ ಬಂದು ಹತಕೊಂಡೆ ಗಾಡಿನಾ.
ಆಂತು ೪ ಗಂಟೆಗೆ ಸಿರ್ಸಿ ಬಸ್ ನಿಲ್ದಾಣಾ ಕಂಡ ಕುಡಲೆ ಗಟ್ಟಿ ಉಸರ್ಬಿಟ್ಟೆ. ಸಂತಿಗೆ ಬಂದವ್ಕೆಲ್ಲಾ ಸಿಗನ ಹೇಳಿ ಮನೆಗೆ ದಾರಿ ಹಿಡದಿ. ಇದು ಒಂತರ ಮರಯಲೆ ಆಗದೊ ಹೋದಂತ ಪ್ರಯಾಣಾ ಆಗೊತು. ಇದರ ಮಜಾ ಇನ್ನು ಅರಾಮ್ ಆಗಿ ಮನೆಗೆ ಹೋಗಿ ಮುಟ್ಟಿದ್ರಲ್ಲಿ ಒಮ್ಮೆನು ಬಂಜಿಲ್ಲೆ.